Nadiprakarana Suladi - Raga:Hamsanandi by TADIPATRI GURUKULA published on 2019-10-10T22:45:42Z By Smt.Nandini Sripad , Blore... " ಹತ್ತೈದು ವಿಂಶತಿ ಮ್ಯಾಲೆರಡು ಸಾವಿರ " , ನಾಡಿ ಪ್ರಕರಣ ಸುಳಾದಿ , ಶ್ರೀ ವಿಜಯದಾಸರ ರಚನೆ , ರಾಗ: ಹಂಸಾನಂದಿ.. ಧ್ರುವತಾಳ ಹತ್ತೈದು ವಿಂಶತಿ ಮ್ಯಾಲೆರಡು ಸಾವಿರ ಮತ್ತೆ ನೂರೊಂದು ನಾಡಿ ದೇಹದೊಳಗೆ ತಥ್ಥಳಿಸುತಿಪ್ಪದು ಬಲಸವ್ಯ ವಿಡಿದು ಯಿ - ನಿತ್ತು ಕೇಳುವದು ನಾಡಿಗಳ ಶಾಖಾ ಹತ್ತು ಹತ್ತೊಂದು ಮುಖ್ಯ ನಾಡಿಯ ನೂರರಿಂದ ಬಿತ್ತರಿಸಿ ಗುಣಿಸೆ ಅಯುತ ನೂರು ಸತ್ಯವಾಯಿತು ನೋಡಿ ಇದಕೆ ವಿವರವುಂಟು ಉತ್ತಮ ಗುಣದವರು ತಿಳಿಯಬೇಕು ಹತ್ತು ಹತ್ತು ಗುಣಿಸಿ ಅದರನ್ನು ಅಷ್ಟರಿಂದ ಜತ್ತಾಗಿ ಹೆಚ್ಚಿಸಲು ಸಾವಿರವಹುದು ಇತ್ತ ಮುಂದಕೆ ನೂರು ಇಟ್ಟುಕೊಂಡು ಒಂ - ಭತ್ತರಿಂದಲಿ ಗುಣಿಸೆ ಒಂಭತ್ತು ನೂರು ಸುತ್ತದಿರಿ ಇನ್ನು ತ್ರಯನೂರು ಎಂಟರಿಂದ ಚಿತ್ತದಲ್ಲಿ ಗುಣಿಸೆ ಆದಾದಿದಕೊ ಇ - ಪ್ಪತ್ತು ನಾಲ್ಕು ನೂರು ಆ ತರುವಾಯ ಒಂ - ಭತ್ತು ಸಾವಿರದ ಆರುನೂರು ಆರ್ಥಿಯಿಂದಲೆ ಇದೆ ಆರಾರಿಂದ ಗುಣಿಸೆ ಹತ್ತೈದು ಯೇಳು ಸಾವಿರಾರು ನೂರು ಇತ್ತಂಡದಿಂದ ಪೂರ್ವೋತ್ತರ ನೋಡೆ ಅರ - ವತ್ತೊಂದು ಸಾವಿರೆಂಟೊಂದು ನೂರು ಮತ್ತೆ ಇದರ ಕೆಳಗೆ ಮ್ಯಾಲಿನ ಅಯುತ ನೂರು ಇತ್ತರೆ ಸಪ್ತೆರಡು ಆಯುತ ನಾಡಿಯು ನಿತ್ಯವೆ ಸರಿಯಿದಕೆ ನೂರೊಂದು ಮುಖ್ಯನಾಡಿ ತತ್ತಳಗೊಳ್ಳದಲೆ ಕೂಡಿಸಲು ಮತ್ತೆ ವುಳ್ಳದಕೆ ಹೆಚ್ಚುವಾದಿಷ್ಟೆ ನಾಡಿಗಳು ಮರ್ತ್ಯ ಲೋಕದ ಜನರು ಗುಣಿಸಿದರು ಅತ್ಯಂತ ಮಹಿಮಾ ನಮ್ಮ ವಿಜಯವಿಠ್ಠಲರೇಯ ಸ್ತೋತ್ರ ಮಾಡಿದವರ ಮನಕೆ ಇಂತು ತಿಳಿಪುವಾ ॥ 1 ॥ ಮಟ್ಟತಾಳ ಇನಿತು ನಾಡಿಯ ಶಾಖ ಭೇದವನ್ನೆ ತಿಳಿದು ಗುಣಿಸುವದು ನಿತ್ಯ ಸಕಲರು ಮನದಲ್ಲಿ ಇನಿತರೊಳಗೆ ಮುಖ್ಯ ನೂರೊಂದು ನಾಡಿ ಅನಿತರ ಮಧ್ಯದಲಿ ಕೇವಲ ಪೆಸರಾಗಿ ಮಿನುಗುತಿಪ್ಪವು ದ್ವಾದಶ ನಾಡಿಗಳಲ್ಲಿ ಕೊನೆ ಮೊದಲೊಂದಾಗಿ ನವ ದ್ವಾರವೆ ವಿಡಿದು ಘನನಾಡಿ ವೊಂದೆ ಅಡಿ ಅಂಬರವ್ಯಾಪ್ತಿ ತನುವು ವ್ಯಾಪಿಸಿ ಕೊಂಡದು ಒಂದು ನಾಡಿ - ಯನು ತಿಳಿವದು ಒಂದೆ ನಾಡಿಯು ಒಂದೇ ಠಾ - ವಿನಲಿ ಪೊಂದಿಪ್ಪದು ತಿಳಿದರೆ ಬಲು ಸುಲಭ ಕ್ಷಣ ಬಿಡದಲೆ ಕಾವ ವಿಜಯವಿಠ್ಠಲರೇಯ ಚಿನುಮಯನಾಗಿ ಕಾಣಿಸುವನು ಒಂದರಲ್ಲಿ ॥ 2 ॥ ತ್ರಿವಿಡಿತಾಳ ಒಂದೊಂದು ನಾಡಿಯಲಿ ಒಂದೊಂದು ನದಿಗಳು ಕುಂದದೆ ಉಂಟು ಹನ್ನೆರಡರಲ್ಲಿ | ಮಂದಾಕಿನಿ ಇಡಾ ನಾಡಿಯಲ್ಲಿ ಭಾನು - ನಂದನೆ ಪಿಂಗಳಾನಾಡಿಯಲ್ಲಿ ಗಾಂಧಾರಿಯಲಿ ವುಂಟು ಕಾವೇರಿ ಹಸ್ತಿನಿಗೆ ಶಿಂಧು ನದಿಯೆನ್ನಿ ತಾಮ್ರಪರ್ಣಿ ಸಂದಿದೆ ಬಹು ಬಗೆ ಲಂಬುಶಿನಾಡಿಯಲ್ಲಿ ಛಂದುಳ್ಳ ಗೋಮತಿ ಮಧ್ಯನಾಡಿ - ಯಿಂದ ಗಂಡಿಕೆ ನೋಡಿ ಸರಸ್ವತಿ ನಾಡಿಯಲ್ಲಿ ನಂದ ಕೃಷ್ಣವೇಣಿ ಕುಹದಿ ಸೋಮ - ನಂದನೆ ತಪತಿ ಶಂಖಿನಿ ನಾಡಿಯಲ್ಲಿ ವಾಸ - ವೆಂದು ತಿಳಿಯೊ ಗೋದೆ ವಾರುಣಿ ನಾಡಿಯಲ್ಲಿ ಅಂದವಾದ ಪೂರ್ಣ ಪೂರ್ಣ ಪಯಶ್ವಿನಿ - ಯಿಂದ ಪುಟ್ಟಿಪದು ಅಲ್ಲಿಗಲ್ಲಿ ಪೊಂದಿ ಕೊಂಡಿಪ್ಪವು ಜ್ಞಾನಿಗಳು ಸ್ತುತಿಸಿ ಮಿಂದು ಪರಮ ಪದವಿಯ ಪಡಕೊಂಬುವರೊ ವೃಂದಾರಕ ವಂದ್ಯ ವಿಜಯವಿಠ್ಠಲರೇಯನ ಸಂದರುಶನ ಮಾಳ್ವ ಮಾಹತ್ಮ ಬಲ್ಲನು ॥ 3 ॥ ಅಟ್ಟತಾಳ ಮಹತತ್ವಾತ್ಮಕ ಬಲಭಾಗದ ನಾಡಿ ಮಹದೇವತತ್ವಾತ್ಮಕ ಎಡಗಡೆ ನಾಡಿ ಇಹದನು ನೋಡಿ ಇವಕಿವಕೆ ಮಾನಿಗಳುಂಟು ಆ ಹಿರಣ್ಯೋದರ ವಾಯು ಇವರ ಪತ್ನಿ ಮಹಕೇಶ ಸರ್ಪ ಖಗೇಶ್ವರ ತರುವಾಯ ರೋಹಿಣಿ ನೀಲ ಮೊದಲಾದ ಸತಿಯರು ಶ್ರೀಹರಿಗೆ ಹೆಂಡರು ಕಾಣೊ ತಿಳಿವದು ಗುಹನ ಜನನಿ ವಾರುಣಿ ಸೌಪರಣಿಯು ಮೋಹದಿಂದಲಿ ನಾಡಿ ನಾಡಿಯಲಿಪ್ಪರು ರಹಸ್ಯವಿದು ಬಿಚ್ಚಿ ಬಿಸಾಟದೀರು ಕುಹಕರಿಗೆ ಪೇಳಿದರೆ ಫಲಿಸದು ಮೋಹನಮೂರುತಿ ನಮ್ಮ ವಿಜಯವಿಠ್ಠಲರೇಯ ಇಹನೊ ಜ್ಞಾನಾನಂದಮಯನಾಗಿ ॥ 4 ॥ ಆದಿತಾಳ ಪೊಕ್ಕಳ ಭಾಗದಿಂದ ನಾಡಿಗಳೊಂದೊಂದು ದಿಕ್ಕಿಗೆ ಪೋಗಿಪ್ಪವು ಶೋಧಿಸಿ ನೋಡುವದು ಮುಕ್ಕಣ್ಣನುತ ವಾಯು ನಿತ್ಯ ಜೀವಿಗಳ ತಕ್ಕ ವ್ಯಾಪಾರವ ಮಾಡುವ ಬಿಡದೆ ದೇ - ವಕ್ಕಳ ಕೂಡ ತಾನೆ ಹರಿ ಪ್ರೇರಣೆಯಿಂದ ಭಕ್ತಿ ಭುಕ್ತಿಯ ಕೊಡುವ ವಂದನೇಕ ರೂಪನಾಗಿ ಸಿಕ್ಕ ಗೊಡನು ತನ್ನ ಭಕ್ತರ ನರಕದಲ್ಲಿ ರಕ್ಕಸಗಣಕೆ ಕುವೃತ್ತಿಯ ಪ್ರೇರಿಸಿ ಕಕ್ಕಸಗತಿಯಲ್ಲಿ ಸೇರಿಸುವ ಹರುಷದಲ್ಲಿ ಸೊಕ್ಕಿದವರಗಂಡ ವಿಜಯವಿಠ್ಠಲರೇಯ ದಕ್ಕುವ ವಿದರಂತೆ ಧೇನಿಪ ಸುಜನರಿಗೆ ॥ 5 ॥ ಜತೆ ನಾಡಿ ಪ್ರಕರಣವನು ತಿಳಿದು ಕೊಂಡಾಡಲು ಗೂಡಿನೊಳಗಿದ್ದಂಥ ವಿಜಯವಿಠ್ಠಲ ಒಲಿವ ॥ Genre Learning